Shoebill :
ಪೂರ್ವ ಆಫ್ರಿಕಾದಲ್ಲಿ ಮಾತ್ರ ಕಾಣಬರುವ ಸುಮಾರು 5 ಅಡಿ ಉದ್ದ, 4 ಅಡಿ ಅಗಲದ ದೈತ್ಯಾಕಾರದ ಪಕ್ಷಿಯಿದು.ಇದರ ಕೊಕ್ಕು 'ಶೂ' ಆಕಾರದಲ್ಲಿರುವುದರಿಂದ ಇದಕ್ಕೆ ಶೂಬಿಲ್ ಎಂದು ಹೆಸರು ಬಂದಿದೆ. ಈ ಕೊಕ್ಕು ಸುಮಾರು 9 ಇಂಚು ಉದ್ದ, 4 ಇಂಚು ಅಗಲವಿರುತ್ತದೆ. ವಿವಿಧ ರೀತಿಯ ಮೀನು,ಹಾವು,ಕಪ್ಪೆ,ಹಲ್ಲಿ,ಇಲಿ,ಮೊಸಳೆಯ ಮರಿಗಳು ಇದರ ಆಹಾರ. ತನ್ನ ಆಹಾರಕ್ಕಾಗಿ ಗಂಟೆಗಟ್ಟಲೆ ಪ್ರತಿಮೆಯಂತೆ ಕಾಯುತ್ತಾ ನಿಲ್ಲುವುದರಿಂದ ಇದನ್ನು Statue-like bird ಎಂದೂ ಕರೆಯುತ್ತಾರೆ. ಯಾವಾಗಲೂ ಒಂಟಿಯಾಗಿ ವಾಸಿಸುವ ಇದು ಗುಂಪಿನಲ್ಲಿ ಕಂಡುಬರುವುದಿಲ್ಲ. ಕೇವಲ ಸಂತಾನೋತ್ಪತ್ತಿ ಸಮಯದಲ್ಲಿ ಮತ್ತು ಮರಿ ಹಕ್ಕಿಗಳನ್ನು ಬೆಳೆಸುವ ಸಂದರ್ಭಗಳಲ್ಲಿ ಮಾತ್ರ ಜೋಡಿಯಲ್ಲಿ ಕಂಡುಬರುತ್ತವೆ. ಇಂತಹ ಸುಂದರ ಅದ್ಭುತ ಪಕ್ಷಿ ಈಗ ವಿನಾಶದಂಚಿಗೆ ಸರಿದಿದ್ದು, ಕಾಡುಗಳಲ್ಲಿ ಇವುಗಳ ಸಂಖ್ಯೆ ಕೇವಲ 5000-8000 ಎಂದು ಅಂದಾಜಿಸಲಾಗಿದೆ. ಈ ಕ್ಷೀಣಿಸುವಿಕೆಗೆ ಮಾನವನಿಂದ ಇವುಗಳ ವಾಸಸ್ಥಳಗಳ ನಾಶವೇ ಮೂಲ ಕಾರಣವಾಗಿರುವುದು ಖೇದದ ಸಂಗತಿಯಾಗಿದೆ.

(ಕೃಪೆ: ಇಂಟರ್ನೆಟ್)
No comments:
Post a Comment