Meerkats or Suricate:
ಇವು ಬೋಸ್ಟ್ವಾನದ ಕಲಹರಿ ಮರುಭೂಮಿ, ನಮೀಬಿಯಾದ ನಮೀಬ್ ಮರುಭೂಮಿ, ನೈಋತ್ಯ ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕಂಡುಬರುವ ಮುಂಗುಸಿ ಜಾತಿಗೆ ಸೇರಿದ ಮಾಂಸಾಹಾರಿ ಸಸ್ತನಿಗಳು. ಇವು ಕಾಲೋನಿಗಳಲ್ಲಿ, ಅಂದರೆ ಗುಂಪುಗಳಲ್ಲಿ ವಾಸಿಸುವ ಪ್ರಾಣಿಳಾಗಿದ್ದು ಒಂದು ಕಾಲೋನಿ ಸಾಮಾನ್ಯವಾಗಿ 30-50 ಮೀರ್ಕ್ಯಾಟ್ ಗಳನ್ನು ಒಳಗೊಂಡಿರುತ್ತದೆ. ಇವುಗಳ ಪ್ರಮುಖ ಆಹಾರ ಕೀಟಗಳಾದರೂ ಕೆಲವೊಮ್ಮೆ ಹಲ್ಲಿ, ಹಾವು, ಚೇಳು, ಜೇಡ, ಜರಿ,ಇತ್ಯಾದಿಗಳನ್ನೂ ತಿನ್ನುತ್ತವೆ. ಒಂದು ಮೀರ್ಕ್ಯಾಟ್ ತನ್ನ ತೂಕದಷ್ಟೆ ಮರಳನ್ನು ಕೆಲವೇ ಸೆಕೆಂಡುಗಳಲ್ಲಿ ತೋಡಿ ನೆಲದಲ್ಲಿ ಬಿಲಗಳನ್ನು ಮಾಡುವ ಚಾಕಚಕ್ಯತೆ ಹೊಂದಿದ್ದು ಹೀಗೆ ತೋಡಿದ ಬಿಲಗಳಲ್ಲಿ ಅವು ವಾಸಿಸುತ್ತದೆ. ಹಗಲು ವೇಳೆಯಲ್ಲಿ ಮಾತ್ರ ಬಿಲದಿಂದ ಹೊರಬರುವ ಇವು, ಆಹಾರ ಹುಡುಕುವ ಸಂದರ್ಭಗಳಲ್ಲಿ, ಗುಂಪಿನಲ್ಲಿರುವ ಒಂದೆರಡು ಮೀರ್ಕ್ಯಾಟ್ ಗಳು ಗಾರ್ಡ್ ನಂತೆ ಕಾವಲು ಕಾರ್ಯನಿರ್ವಹಿಸುತ್ತಿದ್ದರೆ ಮಿಕ್ಕವು ಆಹಾರ ಹುಡುಕುವಲ್ಲಿ ನಿರತವಾಗಿರುತ್ತವೆ.ಶತ್ರುಗಳನ್ನು ಕಂಡೊಡನೆ ವಿವಿಧ ಶಬ್ಧಗಳ ಮೂಲಕ ಎಚ್ಚರಿಕೆ ನೀಡುವ ಕೆಲಸ ಈ ಗಾರ್ಡ್ ಅಥವಾ ಸೆಂಟ್ರಿಗಳದ್ದು. ಒಂದೊಂದು ಶತ್ರುವಿಗೂ ಪ್ರತ್ಯೇಕ ಶಬ್ಧ ಹೊರಡಿಸುವ ಅದ್ಭುತ ಕಲೆ ಇವುಗಳಿಗಿರುವುದು ಸೋಜಿಗವೇ ಸರಿ.ಸುಮಾರು 35-50 ಸೆ.ಮೀ. ಉದ್ದ, 0.5-2.5 ಕಿ.ಗ್ರಾಂ. ತೂಕವಿರುವ ಇವುಗಳ ಆಯಸ್ಸು ಸೆರೆಯಲ್ಲಿ 12-14 ವರ್ಷ ಹಾಗೂ ಕಾಡಿನಲ್ಲಿ ಕೇವಲ 6-7 ವರ್ಷ ಮಾತ್ರ.
(Source: Wikipedia)

No comments:
Post a Comment